Monday, 2 March 2020

ಬೆಂಗಳೂರಲ್ಲಿ ಹೇರ್ ಟ್ರಾನ್ಸ್ಪ್ಲಾಂಟ್

ಸ್ನೇಹಿತರೇ,
ಹೇರ್ ಟ್ರಾನ್ಸ್ಪ್ಲಾಂಟ್ ಅನ್ನುವುದು ಒಂದು ಚಿಕಿತ್ಸೆ ಮತ್ತು ಸೇವೆ ಅನ್ನೋದಕ್ಕಿಂತ ಹೆಚ್ಚಾಗಿ ಒಂದು ಹಣ ಮಾಡುವ ದಾರಿಯಾಗಿದೆ. ಒಂದೊಂದು ಏರಿಯಾದಲ್ಲೂ 15-20ಟ್ರಾನ್ಸ್ಪ್ಲಾಂಟ್ ಸೆಂಟರ್ ಗಳಿದ್ದಾವೆ.  ಇವುಗಳಲ್ಲಿ ಬೆರಳೆಣಿಕೆಯಷ್ಟು ಒಳ್ಳೆಯ ಆಸ್ಪತ್ರೆಗಳಿದ್ರೆ, ಅನೇಕ ಕಡಿಮೆ ದರ್ಜೆಯ ಸೆಂಟರ್ ಗಳಿವೆ.  20x30 ರೂಮ್ ಇದ್ರೂ ಸಾಕು ಒಂದು ಟ್ರಾನ್ಸ್ಪ್ಲಾಂಟ್ ಸೆಂಟರ್ ಮಾಡ್ತಿದಾರೆ. ಅನೇಕ ಕಡೆ ವೈದ್ಯರೇ ಇಲ್ಲದ ಕಡಿಮೆ ಹಣಕ್ಕೆ ಟ್ರಾನ್ಸ್ಪ್ಲಾಂಟ್ ಮಾಡುವ ಆಸ್ಪತ್ರೆಗಳನ್ನೂ ಕಾಣಬಹುದು. ಸರಿಯಾದ ಉಪಕರಣಗಳಿಲ್ಲದ ಟ್ರಾನ್ಸ್ಪ್ಲಾಂಟ್ ಸೆಂಟರ್ ಸಹ ಇವೆ. ಒಂದು ಪಕ್ಷ ಏನಾದ್ರೂ ತೊಂದರೆ ಆದರೆ ಸೂಕ್ತ ತುರ್ತು ಚಿಕಿತ್ಸೆಗಳು ಸಹ ಇರದ  ಸೆಂಟರ್ ಗಳಿವೆ. 
  ನಾವು ಯಾವುದೇ ಆಸ್ಪತ್ರೆಗೆ ಹೋದರೂ ಅವರು ನಮಗೆ ಅವರ ಆಸ್ಪತ್ರೆ ಬಿಟ್ರೆ ಬೇರೆ ಕಡೆ ಮೋಸ ಮಾಡ್ತಾರೆ... ತಾವು ಮಾತ್ರ ಬೆಸ್ಟ್ ರಿಸಲ್ಟ್ ಕೊಡ್ತಿವಿ ಅಂತ ನಂಬಿಸ್ತಾರೆ.
ಹಾಗಾಗಿ ಸ್ನೇಹಿತರೇ ದಯವಿಟ್ಟು ವೈದ್ಯರ ಬಳಿ ಮಾತಾಡಿ... ಆಪರೇಶನ್ ಥಿಯೇಟರ್ ನೋಡಿ... ಹೇರ್ ಲೈನ್ ಫೈನಲ್ ಮಾಡಿ... ಮುಂದುವರೆಯುವುದು ಒಳ್ಳೆಯದು. ನಾನು ಸಹ ಇಂಥಹ ಗೊಂದಲಗಳಲ್ಲಿ ಸಿಕ್ಕಿಕೊಂಡಿದ್ದೆ... ನಂತರ ಎಲ್ಲಾ ರೀತಿ ನೋಡಿ.. ನನಗೆ ಒಳ್ಳೆಯದೆನಿಸಿದ ಆಸ್ಪತ್ರೆ ಆಯ್ದುಕೊಂಡು.. ಒಳ್ಳೆಯ ರಿಸಲ್ಟ್ ಪದೆದುಕೊಂದಿದ್ದಿನಿ.
ಹೆಚ್ಚಿನ ಮಾಹಿತಿಗಾಗಿ.. whats app ಮಾಡಿ 8722332797
   

Tuesday, 28 January 2020

            ಹೇರ್ ಟ್ರಾನ್ಸ್ಪ್ಲಾಂಟೇಶನ್

ಪ್ರೀತಿಯ ಸ್ನೇಹಿತರೇ,
ಈಗಾಗಲೇ ಬೊಕ್ಕ ತಲೆಯ ಸಮಸ್ಯೆಯನ್ನು ಎದುರಿಸುತ್ತಿರುವವರು, ಅಸೆಗಣ್ಣಿನಿಂದ ನೋಡುತ್ತಿರುವ ಒಂದು ವೈಜ್ಞಾನಿಕ ಅಪತ್ಬಾಂಧವ ಎನ್ನಬಹುದು. ಈ ಲೇಖನದಲ್ಲಿ ಇದರ ಬಗ್ಗೆ ತಿಳಿದುಕೊಳ್ಳೋಣ.
 ಹೇರ್ ಟ್ರಾನ್ಸ್ಪ್ಲಾಂಟೇಶನ್ ನಲ್ಲಿ ಮುಖ್ಯವಾಗಿ  ಎರಡು ವಿಧಾನಗಳಿವೆ. ಮೊದಲನೆಯದು FUT ಎರಡನೆಯದ್ದು FUE. (ಇತ್ತೀಚಿಗೆ ಮೂರನೆಯ ವಿಧಾನ BioFUE ಸಹ ಬಳಕೆಯಲ್ಲಿದೆ.) ಒಂದೊಂದಾಗಿ ಈ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.


FUT
ಫಲಿಕ್ಯುಲರ್ ಯುನಿಟ್ ಟ್ರಾನ್ಸ್ಪ್ಲಾಂಟೇಶನ್ ಅಥವಾ ಸ್ಟ್ರಿಪ್ ವಿಧಾನ ಎಂತಲೂ ಕರೆಯುತ್ತಾರೆ. ಇಲ್ಲಿ ದಾನಿ ಪ್ರದೇಶದಿಂದ ಅಂದರೆ donar area ದಿಂದ ಕೂದಲನ್ನು ಚರ್ಮದ ಒಂದು ಪದರದೊಂದಿಗೆ ಕತ್ತರಿಸಿ ತೆಗೆದುಕೊಳ್ಳುತ್ತಾರೆ.

ನಂತರ ಒಂದೊಂದಾಗಿ ಬೇರ್ಪಡಿಸಿ, ಕೂದಲು ಬೇಕಾಗಿರುವ ಸ್ಥಳದಲ್ಲಿ ಕಸಿ ಅಥವಾ ನಾಟಿ ಮಾಡುತ್ತಾರೆ. ಇದರ ಒಳ್ಳೆಯ ಅಂಶ ಎಂದರೆ ಹೆಚ್ಚು density ಅಥವಾ ದಟ್ಟತೆ. ಇದರ ತೊಂದರೆ ಎಂದರೆ ಗಾಯದ mark ಅಥವಾ ಗುರುತು ಹಾಗೇ ಉಳಿದು ಬಿಡುತ್ತದೆ ಮತ್ತು ಗಾಯ ಮಾಯಲು heal ಆಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ಇತ್ತೀಚಿಗೆ ಈ ವಿಧಾನವನ್ನು ಹೆಚ್ಚು ಬಳಸುತ್ತಿಲ್ಲ. ಇದರ ಬಗ್ಗೆ ಇನ್ನೂ ವಿವರವಾಗಿ ಇನ್ನೊಂದು ಲೇಖನ ಬರೆಯುತ್ತೇನೆ. ಈಗ ಇಷ್ಟು ಸಾಕು ಎಂಬುದು ನನ್ನ ಅನಿಸಿಕೆ.


FUE
ಫಾಲಿಕ್ಯುಲರ್ ಯುನಿಟ್ ಎಕ್ಸ್ ಟ್ರ್ಯಾಕ್ಷನ್ ಎಂಬುದು ಈ ವಿಧಾನದ ಹೆಸರು. ಇಲ್ಲಿ ಚರ್ಮದ ಜೊತೆ ಕೂದಲನ್ನು ತೆಗೆಯದೇ ನೇರವಾಗಿ ಕೂದಲಿನ graftಗಳನ್ನು ಅಥವಾ ಒಂದೊಂದಾಗಿ ಕೂದಲುಗಳನ್ನು  ಬೇರು ಸಮೇತ ತೆಗೆದುಕೊಳ್ಳುತ್ತಾರೆ. ಹಾಗಾಗಿ ಕತ್ತರಿಸಿದ ದೊಡ್ಡ ಗುರುತು ಉಲಿಯುವುದಿಲ್ಲ. ಬೇಗನೇ ಗಾಯ ಮಾಯುತ್ತದೆ ಅಥವಾ ಗುಣವಾಗುತ್ತದೆ.

ಈ ಲೇಖನದಿಂದ ನಿಮಗೆ ಮಾಹಿತಿ ಸಿಕ್ಕಿದೆ ಎಂದು ನಂಬಿದ್ದೇನೆ. ಇಲ್ಲಿಯವರೆಗೆ ಓದಿದ್ದಕ್ಕೆ ಧನ್ಯವಾದಗಳು. ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ. ಒಳ್ಳೆಯದಾಗಲಿ.

                               ನಿಮ್ಮ ಪ್ರೀತಿಯ

  •                                       ಗುರು


Saturday, 25 January 2020

ಆತ್ಮಿಯರೇ...
        ಕೂದಲು ಉದುರುವ ಸಮಸ್ಯೆ ಇರುವಂತಹ ಸ್ನೇಹಿತರು ಕೆಲವು ಅಂಶಗಳನ್ನು ಜಾಗ್ರತೆಯಿಂದ ಗಮನಿಸಬೇಕು. ಅವುಯಾವುವೆಂದರೆ ನಿಮ್ಮ ಕೂದಲು ಉದುರುವ ಸಮಸ್ಯೆಗೆ ಇರಬಹುದಾದ ಕಾರಣಗಳನ್ನು ಪತ್ತೆ ಹಚ್ಚುವುದು ಹಾಗೂ ಹತ್ತಿರದ ತಜ್ನ ವೈದ್ಯರನ್ನು ಕಾಣುವುದು. ಬೇಕಂತಲೇ ನಾನು ವೈದ್ಯರನ್ನು ಕಾಣುವುದು ಎಂಬ ಮಾತನ್ನು ಎರಡನೆಯ ಅಂಶವಾಗಿ ಹೇಳಿದ್ದೇನೆ. ಯಾಕಂದ್ರೆ  ಬಹುತೇಕ ಡಾಕ್ಟರ್ಸ್ಸ್ ನಮ್ಮ ಕೂದಲು ಉದುರುವ ಸಮಸ್ಯೆಗೆ ಕಾರಣಗಳನ್ನು ಪತ್ತೆ ಮಾಡುವ ಪ್ರಯತ್ನ ಮಾಡದೇ... ಎಲ್ಲರಿಗೂ ಒಂದೇ ರೀತಿಯ ಔಷಧಿಗಳನ್ನು  ಅಥವಾ ಚಿಕಿತ್ಸೆಯನ್ನು ಸೂಚಿಸುತ್ತಾರೆ.ಇದು ಅಷ್ಟೊಂದು ಒಳ್ಳೆಯದಲ್ಲ ಅಂತ ನನ್ನ ಅಭಿಪ್ರಾಯ. ಅದಕ್ಕೆ ಸ್ನೇಹಿತರೇ ಹೇಳ್ತಿರೋದು ದಯವಿಟ್ಟು ಯಾವ ಕಾರಣಕ್ಕೆ ಕೂದಲು ಉದುರುತ್ತಿವೆ ಎಂದು ತಿಳಿದುಕೊಳ್ಳುವ ಪ್ರಯತ್ನ ಮಾಡಿ.

 ಕೂದಲು ಉದುರುವ ಸಮಸ್ಯೆ ಬರುವುದಕ್ಕೆ ಕಾರಣವಾಗುವ  ಅಂಶಗಳನ್ನು ಈ ಕೆಳಗಡೆ ಪಟ್ಟಿ ಮಾಡಿದ್ದೀನಿ. ಇವುಗಳ ಸಹಾಯ ಪಡೆದು ಸೂಕ್ತ ಕ್ರಮಗಳನ್ನು ಕೈಗೊಳ್ಳಿ.
 ಟೆನ್ಶನ್ ಅಂದರೆ ಮಾನಸಿಕ ಒತ್ತಡ
ನಿದ್ರಾಹೀನತೆ
ತಲೆಗೆ ರಕ್ತ ಸಂಚಾರದ ಕೊರತೆ ಅಂದರೆ ಸ್ಕ್ಯಾಲ್ಪಿಗೆ ರಕ್ತ ಸಂಚಾರದ ಕೊರತೆ
 ಉಷ್ಣ ಅಂದ್ರೆ ಹೀಟ್
ತಲೆಹೊಟ್ಟು
ತಲೆಯಲ್ಲಿ ಅತಿಹೆಚ್ಚಾಗಿ ಎಣ್ಣೆ ಅಂಶ ಸೀಬಮ್
ಗಡಸುನೀರು
ಫಂಗಸ್ ಅಥವ ಬ್ಯಾಕ್ಟೀರಿಯಾ ( ಸುಕ್ಷ್ಮಾ ಣುಜೀವೀ )
ಗಂಭೀರ ರೋಗ
ಔಷಧಿಗಳ ಸೈಡ್ ಎಫೆಕ್ಟ್
ಮುಂತಾದವು....
ಈ ಕೆಳಗಿನ ಲಿಂಕ್ ಟಚ್ ಮಾಡಿದ್ರೆ, ಇದರ ಬಗ್ಗೆ ಮಾಡಿರುವ ವಿಡಿಯೋ ಸಹ ನೋಡಬಹುದು.
https://youtu.be/iA3FVCMh2DM

ಯಾವ ಕಾರಣದಿಂದ ಕೂದಲು ಉದುರುತ್ತಿದೆ ಎಂದು ಅರ್ಥಮಾಡಿಕೊಂಡು  ಚಿಕ್ಕದಾಗಿ ಜೀವನಕ್ರಮ ಬದಲಾಯಿಸಿಕೊಳ್ಳುವುದು ಬಹಳ ಮುಖ್ಯ.
ಹಾಗಾಗಿ ಸ್ನೇಹಿತರೆ ಮೊದಲಿಗೆ ಈ ಆರ್ಟಿಕಲ್ ನಲ್ಲಿ ನೀವು ತಿಳ್ಕೊಂಡ್ರೆ ಅಂತ ವಿಷಯ ಏನಂದ್ರೆ ಕೂದಲು ಉದುರುವ ಸಮಸ್ಯೆಗೆ ಕಾರಣಗಳು ಏನೇನಿರುತ್ತೆ ಅನ್ನೋದನ್ನ ಪಟ್ಟಿಮಾಡಿ ಅವುಗಳನ್ನು ನೀವು ದೂರ ಮಾಡಬೇಕು ಆದರೆ ನಿಮಗೆ ಅನಿಸುತ್ತಿರಬಹುದು ಅನಿಸುತ್ತಿರಬಹುದು ಬಹಳ ಮುಖ್ಯವಾದ ಸಮಸ್ಯೆ ಇದಕ್ಕೆ ಮುಖ್ಯವಾದ ಕಾರಣ ಸಮಸ್ಯೆ ಬಗ್ಗೆ ಹೇಳುತ್ತಿಲ್ಲ ವಂಶವಾಹಿನಿ ಸಮಸ್ಯೆ ಅದರ ಬಗ್ಗೆನೇ ಹೇಳ್ತಾ ಇಲ್ಲ ಅಂತ. ಆದರೆ ಸ್ನೇಹಿತರೆ ವಂಶವಾಹಿ ಸಮಸ್ಯೆಯನ್ನು ವೈದ್ಯರಾಗಲಿ ಅಥವಾ ಆಸ್ಪತ್ರೆಗಳ ಆಗಿರಲಿ ಬಹಳ ಹೆಚ್ಚಾಗಿ ಬಿಂಬಿಸುತ್ತವೆ ಅಂತ ನನ್ನ ಅಭಿಪ್ರಾಯ. ಯಾಕಂದರೆ ಇಪ್ಪತ್ತು ವರ್ಷಗಳ ಹಿಂದಿಗಿಂತ  ಈಗಿನ ಕಾಲದಲ್ಲಿ ನಾವು ನೋಡಿದರೆ ಹೆಚ್ಚು ಜನ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ಜೊತೆಗೆ ಅವರ ವಂಶದಲ್ಲಿ ಯಾರಿಗೂ ಬೊಕ್ಕತಲೆಯ ಸಮಸ್ಯೆ ಇಲ್ಲ ಅಂದ್ರು ಅವರಿಗೆ ಕೂದಲು ಉದುರುವುದು ಬಹಳ ಸಾಮಾನ್ಯವಾಗಿದೆ. ನಮಗೆ ಮೇಲೆ ಪಟ್ಟಿ ಮಾಡಿರುವ ಕಾರಣಗಳಿಂದ ಕೂದಲು ಉದುರುತ್ತಿದ್ದರೆ  ಔಷಧಿಗಳು ಅಥವಾ ಚಿಕಿತ್ಸೆಗಾಗಿ ಸಾವಿರಾರು ರೂಪಾಯಿ ಹಣ ಖರ್ಚು ಮಾಡಬೇಕಿಲ್ಲ. ಅನೇಕ ಜನರಿಗೆ ಕೇವಲ ಕೂದಲಿಗೆ ಕೂದಲಿನ ಬೆಳವಣಿಗೆಗೆ ಬೇಕಾದಂತಹ ಸಲ್ಫರ್ ಅದು ಸಿಗದೇ ಇರುವುದರಿಂದ ಅಂತಹ ಜನರಿಗೆ ಕೇವಲ ಈರುಳ್ಳಿಯ ರಸ ಹಚ್ಚಿಕೊಳ್ಳುವುದರಿಂದ ಒಳ್ಳೆಯ ರಿಸಲ್ಟ್ ಬಂದಿರುವುದನ್ನು ನೋಡಿದೀನಿ ಕೆಲವು ಜನರಿಗೆ ಬ್ಯಾಕ್ಟರಿಯಲ್ ಫಂಗಲ್ ಇನ್ಫೆಕ್ಷನ್ ಅಂದ್ರೆ ಸೂಕ್ಷ್ಮಜೀವಿಗಳ ಕಾಟದಿಂದ ಸಹ ಕೂದಲುದುರುವ ಸಮಸ್ಯೆಯನ್ನು ಎದುರಿಸುವುದನ್ನು ನೋಡಿದ್ದೇನೆ. ಇಂತಹ ಸಂದರ್ಭಗಳನ್ನು ಸಹ ಈರುಳ್ಳಿಯ ರಸ ಮತ್ತು ಲೊಳೆಸರ ಅಲವೇರ ಇವುಗಳು ಅದ್ಭುತವಾದಂತಹ ರಿಸಲ್ಟ್ ಕೊಟ್ಟಿರುವುದನ್ನು ಸಹ ನಾನು ನೋಡಿದ್ದೇನೆ.

ಹಾಗಾಗಿ ನಿಮ್ಮ ಸಮಸ್ಯೆಗೆ ಕಾರಣ ನೀವೇ ಹುಡುಕಿದರೆ, ಪರಿಹಾರ ಸುಲಭ ಸುರಕ್ಷಿತ ಉಚಿತ ಹಾಗೂ ಧೀರ್ಘಕಾಲನ  ವಾ ಗಿರುತ್ತದೆ. ನೀವು ನಿಮ್ಮ ಜೀವನದಲ್ಲಿ ಒಂದು ಚಿಕ್ಕ  ಬದಲಾವಣೆಯನ್ನು ತಂದುಕೊಂಡು ಒಳ್ಳೆಯ ರಿಸಲ್ಟ್ ಪಡೆದು ಕೊಳ್ಳಬಹುದು.
 ಅನೇಕ ಜನತೆಗೆ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಈ ರೀತಿಯ  ಮಾಹಿತಿಯ ವಿಡಿಯೋ ಸಹಾಯ ಮಾಡಿದೆ. ಅದರ ಲಿಂಕ್
 ಅದರಿಂದ ಯಶಸ್ವಿ ಆದ ಬಹಳ ಜನ ನನಗೆ ಕರೆ ಮಾಡಿದಾಗ ಹೇಳುತ್ತಾರೆ ವಾಟ್ಸಪ್ ಮಾಡಿ ಸಹ ತಿಳಿಸುತ್ತಾರೆ. ಅದಕ್ಕೋಸ್ಕರ ಹೇಳ್ತಾ ಇದೀನಿ ಸ್ನೇಹಿತರೆ ದಯವಿಟ್ಟು ತಮ್ಮ ಸಮಸ್ಯೆಗೆ ಕಾರಣ ಏನು ಅರ್ಥ ಮಾಡಿಕೊಳ್ಳಿ ನಂತರ ನಿಮ್ಮ ಸಮಸ್ಯೆಗೆ ನೀವೇ ಪರಿಹಾರ ಕಂಡುಕೊಳ್ಳುತ್ತೀರಿ ಹೆಚ್ಚಿನ ಮಾಹಿತಿಗಾಗಿ ವಾಟ್ಸಪ್ ನಲ್ಲಿ ಮೆಸೇಜ್ ಮಾಡಬಹುದು 8 7 2 2 3 3 27 9 7

Monday, 30 December 2019

ಕೂದಲಕಸಿ ಚಿಕಿತ್ಸೆಯ ಬಗ್ಗೆ ಮಾಹಿತಿ. ಹೇರ್ ಟ್ರಾನ್ಸ್ ಪ್ಲಾಂಟ್

       ಪ್ರೀತಿಯ ಸ್ನೇಹಿತರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷ ಎಲ್ಲರ ಬಾಳಲ್ಲಿ ಹೊಸ ಸಂತಸ ಹಾಗೂ ಆತ್ಮವಿಶ್ವಾಸ ತರಲಿ.           


                 ಸ್ನೇಹಿತರೇ,   ಪ್ರತಿಯೊಬ್ಬರಿಗೂ ತಾವು ಸುಂದರವಾಗಿ ಕಾಣಬೇಕು. ಯಾರೂ ನಮ್ಮನ್ನು ಹೀಯಾಳಿಸಬಾರದು ಮತ್ತು ಅತ್ಮವಿಶ್ವಾಸದಿಂದ ಇರಬೇಕು ಎಂದು ಹಂಬಲಿಸುತ್ತಾರೆ. ಆದರೆ ಕೂದಲು ಉದುರುವ ಸಮಸ್ಯೆಯಿಂದ ತಮ್ಮದಲ್ಲದ ತಪ್ಪಿಗಾಗಿ ತಾವು ಜೀವನವಿಡೀ ನೋವಿನಲ್ಲಿ ಬದುಕಿಯೂ ಸತ್ತಂತೆ ಇರುತ್ತಾರೆ. ಸಮಾಜ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೇ ಹಗುರವಾಗಿ ನೋಯಿಸುತ್ತದೆ.
                          ಹಾಗಾಗಿ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿರುವ ಕನ್ನಡ ಜನರಿಗಾಗಿ ಈ  ಬ್ಲಾಗ್ ಅನ್ನು ನಾನು  ಹುಟ್ಟಿದ ದಿನದಂದು   ಪ್ರಾರಂಭಿಸುತ್ತಿದ್ದೇನೆ. ಇನ್ನು ಮುಂದೆ ಕೂದಲಿನ ಸಮಸ್ಯೆಗಳಿಗೆ ಇರುವ ಎಲ್ಲಾ ಸಮಾಧಾನಗಳನ್ನು ಕನ್ನಡ ನುಡಿಯಲ್ಲಿ ತರುವ ಮೂಲಕ ಕನ್ನಡದ ಅಲ್ಪಸೇವೆ ಮಾಡುವ ಚಿಕ್ಕ ಪ್ರಯತ್ನವನ್ನು ಈ ಮೂಲಕ ಮಾಡುವ ಹಂಬಲ ನನ್ನದು.
                             ನೀವೆಲ್ಲರೂ ಪ್ರೋತ್ಸಾಹಿಸುತ್ತೀರೆಂದು ನಂಬಿರುವ
                           ತಮ್ಮ ವಿಶ್ವಾಸಿ.
                                   ಗುರು 

ಬೆಂಗಳೂರಲ್ಲಿ ಹೇರ್ ಟ್ರಾನ್ಸ್ಪ್ಲಾಂಟ್ ಸ್ನೇಹಿತರೇ, ಹೇರ್ ಟ್ರಾನ್ಸ್ಪ್ಲಾಂಟ್ ಅನ್ನುವುದು ಒಂದು ಚಿಕಿತ್ಸೆ ಮತ್ತು ಸೇವೆ ಅನ್ನೋದಕ್ಕಿಂತ ಹೆಚ್ಚಾಗಿ ಒಂದು ಹಣ ಮಾಡುವ ...